VIDWAN Y H VENKATESH BHAT

Mobile: +91 9448720877

Landline: 0821 2560877

"VISHNUMAAYA", #L-69, KHB Colony, IV Stage, Kuvempunagar, Mysore, Karnataka - 570 023

  • Home
  • About Us
  • Services
  • Gallery
  • Appointment
  • Select Language
    • English Version
    • ಕನ್ನಡ ಆವೃತ್ತಿ
...
...
...

ॐ

||ಶ್ರೀಃ|| ಗುರುಭ್ಯಶ್ಚ ಗ್ರಹೇಭ್ಯಶ್ಚ ಮಯಾ ಬದ್ಧೋsಯಮಂಜಲಿಃ| ಪ್ರಸನ್ನಮನಸಸ್ತೇಮೇ ಸತ್ಯಾಂ ಕುರ್ವಂತು ಭಾರತೀಂ||

ವೇದಮೂಲವಾದ ಸಕಲಶಾಸ್ತ್ರಗಳೂ ಸಹ ಮಾನವನ ಶ್ರೇಯೋಭಿವೃದ್ಧಿ ಮುಖಾಂತರ ಮೋಕ್ಷ ಸಾಧನವನ್ನೇ ಪ್ರಧಾನ ಪ್ರಯೋಜನವನ್ನಾಗಿಸಿಕೊಂಡಿವೆ. ಅದರಲ್ಲೂ ಜ್ಯೋತಿಷಶಾಸ್ತ್ರವು ಕಾಲ-ಫಲ ಬೋಧಕವಾಗಿ ತನ್ನ ಪಾರಮ್ಯವನ್ನು ಎತ್ತಿ ತೋರಿಸಿದೆ. ಆದ್ದರಿಂದಲೇ



“ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ”

ಎಂಬ ಉಕ್ತಿಯಂತೆ ವೇದಾಂಗಶಾಸ್ತ್ರಗಳಲ್ಲಿಯೂ ಜ್ಯೋತಿಷಶಾಸ್ತ್ರಕ್ಕೆ ಪ್ರಾಧಾನ್ಯತೆ-ಜವಾಬ್ದಾರಿ ಅಧಿಕವಾಗಿದೆ.
ಪ್ರತಿಯೊಬ್ಬರಿಗೂ ಮುಂದೇನು? ಯಾವ ದಾರಿ?ಎಂಬ ಪ್ರಶ್ನೆಗಳು ಸಹಜವಾದುದು. ಅಂತಹ ಪ್ರಶ್ನೆಗಳಿಗೆ ಎಲ್ಲಿಯಾದರೂ ಉತ್ತರ ಗೊಚರಿಸುವುದಾದರೆ ಅದು ಜ್ಯೋತಿಷಶಾಸ್ತ್ರದಿಂದ ಮಾತ್ರ.



|| ಕರ್ಮಾರ್ಜಿತಂ ಪೂರ್ವಭವೇಸದಾದಿಯತ್ತಸ್ಯ ಪಕ್ತಿಂ ಸಮಭಿವ್ಯನಕ್ತಿ||

ಅಂದರೆ ವ್ಯಕ್ತಿಯ ಜನ್ಮಕಾಲೀನ ಸ್ಪಷ್ಟ ಸಮಯ-ದಿನಾಂಕ-ಸ್ಥಳಗಳಿಂದ ಗಣಿತ ಪ್ರಕ್ರಿಯೆಯ ಮುಖಾಂತರ ಪಡೆಯುವ ಜಾತಕವು- ಆ ವ್ಯಕ್ತಿಯ ಪೂರ್ವಜನ್ಮಾರ್ಜಿತವಾದ ಕರ್ಮಾನುಗುಣವಾಗಿ ಕಷ್ಟ-ಸುಖಗಳನ್ನು ತೋರಿಸುವುದಾಗಿದೆ. ಅಂದರೆ ಯಾವ ಕಾಲದಲ್ಲಿ ಸುಖವನ್ನು ಕಾಣಬಹುದು. ಯಾವ ಸಮಯದಲ್ಲಿ ಕಷ್ಟ ಬಂದೊದಗೀತು, ಯಾವ ದಾರಿಯು ಮುಂದಕ್ಕೆ ಶುಭ ಫಲಪ್ರದವಾದೀತು ಎಂಬೀ ವಿಷಯಗಳನ್ನು ಸೂಚಿಸುವಂತದ್ದೇ ಜಾತಕ. ಪುಣ್ಯಕರ್ಮಜಾತವಾದ ಸುಖವನ್ನು ಅನುಭವಿಸಲು ತೊಂದರೆಯಾಗದು. ಆದರೆ ಪಾಪಕರ್ಮಜಾತವಾದ ಕಷ್ಟ (ರೋಗಾದಿ)ವನ್ನು ಅನುಭವಿಸಲು ಮನಸೊಪ್ಪದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಪರಿಹಾರ (Solutions) ಮಾರ್ಗಗಳನ್ನು ಕಂಡುಕೊಳ್ಳಬೇಕಾದೀತು.



ಯದ್ಧಾತುಕೋಪಜನಿತಾಖಿಲ ರೋಗಶಾಂತ್ಯೈ ತನ್ನಾಥಮಾಶುಜಪತರ್ಪಣ ಹೋಮದಾನೈಃ| ಸಂಪೂಜ್ಯ.................”

ಎಂಬೀ ಶಾಸ್ತ್ರವಚನದಂತೆ ಜಾತಕಸೂಚಿತವಾದ ದೋಷಗಳಿಗೆ ಸೂಕ್ತವಾದ ಪರಿಹಾರಗಳನ್ನು ಮಾಡಿ-ಮಾಡಿಸಿಕೊಂಡು ಜನರು ಸುಖವನ್ನು ಹೊಂದಲಿಎಂಬುದೇ ಪ್ರಧಾನ ಧ್ಯೇಯೋದ್ದೇಶವಾಗಿರುವುದು.

Consultant:

Conclusion

   ಜ್ಯೋತಿಷಶಾಸ್ತ್ರದ ಪ್ರಧಾನ ಉದ್ದೇಶವು ಮಾರ್ಗವನ್ನು ತೋರಿಸುವುದು. ಸುಲಭಗೊಳಿಸುವುದು-ಶ್ರೇಯೋಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಪ್ರೇರೇಪಿಸುವುದು ಆಗಿರುವುದು. ರೋಗಕ್ಕೆ ಔಷಧಿಯೇ ಹೊರೆತು ರೋಗಬಾರದಂತೆ ಔಷಧವಿಲ್ಲ. ಹಾಗೆಯೇ ಉಂಟಾಗುವ ಅಡೆ-ತಡೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾದರೂ ಎಲ್ಲಾ ಫಲಪ್ರಾಪ್ತಿಯೂ (ಅತಿಯಾದ ಆಸೆಗೆ) ಪರಿಹಾರದಿಂದಾಗದು. ಆದ್ದರಿಂದ ಶಾಸ್ತ್ರರೀತಿಯ ಚಿಂತನೆ ಅದರಂತೆ ಸಲಹೆಗಳನ್ನು ಕೊಡಲಾಗುವುದು. ತಮ್ಮ ನಂಬಿಕೆಗನುಸಾರವಾಗಿ ಆಲೋಚಿಸಿ, ನಮ್ಮ ಸಲಹೆಗಳನ್ನು ಕಾರ್ಯಗತಗೊಳಿಸುವುದನ್ನು ಅವರವರ ನಿರ್ಧಾರಕ್ಕೆ ಬಿಡಲಾಗಿದೆ. ಒತ್ತಾಯ ಪೂರ್ವಕವಿಲ್ಲ. ನಮ್ಮ ಸಲಹೆಗಳು ಧಾರ್ಮಿಕ ನೆಲಗಟ್ಟಿನಲ್ಲಿ ಸಂಪೂರ್ಣವಾಗಿ ಪ್ರಜ್ಞಾಪೂರ್ವಕವಾಗಿದ್ದು, ನಿಖರತೆಯನ್ನು ( ಫಲ ಮತ್ತು ಪರಿಹಾರಗಳೆಂಬ ಎರಡೂ ವಿಭಾಗಗಳಲ್ಲೂ) ಹೊಂದುವ ನಂಬಿಕೆ ನಮಗಿದ್ದರೂ, ಕಾನೂನಾತ್ಮಕವಾಗಿ ಅವರವರೇ ಜವಾಬ್ದಾರರು. ಅಲ್ಲದೇ ಆ ಜವಾಬ್ದಾರಿ ನಮಗೆ ಇರುವುದಿಲ್ಲ- ಎಂಬುದಾಗಿ ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇವೆ.   

“ ಸಲಹೆ ಮಾತ್ರ ನಮ್ಮದು, ತೀರ್ಮಾನ ನಿಮ್ಮದೇ”

   They are fully responsible for everything they do or not to do based on our predictions (suggestions) and fully agree not to hold us liable in any form.  

“ ಸಲಹೆ ಮಾತ್ರ ನಮ್ಮದು, ತೀರ್ಮಾನ ನಿಮ್ಮದೇ”

Need Help Contact Us

 Logo Name
Postal Address

"VISHNUMAAYA", # L-69, KHB Colony, IV Stage,
Kuvempunagar, Mysore - 570 023
Karnataka.

Phone : +91 9448720877

Landline : 0821-2560877

Email : venkateshbhatmysore@gmail.com

Need Help Contact Us

 Logo Name

"VISHNUMAAYA", # L-69, KHB Colony, IV Stage,
Kuvempunagar, Mysore - 570 023
Karnataka.

Phone : +91 9448720877

Landline : 0821-2560877

Email : venkateshbhatmysore@gmail.com

Enquiry Form


All the information mentioned is for guidance only.